Wednesday, 2 August 2017

sabba sadharana cetasika in kannada ಸಬ್ಬಸಾಧಾರಣ

ಅನ್ಯ ಸಮಾನ ಚೇತಸಿಕಾ :

1.        ಸಬ್ಬಸಾಧಾರಣ : ಇದು ಎಲ್ಲಾ ವರ್ಗದವರ ಚಿತ್ತಗಳಲ್ಲಿ ಬರುವುದರಿಂದಾಗಿ ಸರ್ವಸಾಧಾರಣ ಚೇತಸಿಕಾ ಎನ್ನುತ್ತಾರೆ.
                1)           ಪಸ್ಸಾ (ಸ್ಪರ್ಶ) : ಇದು ಇಂದ್ರೀಯಗಳು ಮತ್ತು ಇಂದ್ರೀಯ ವಿಷಯಗಳ ಸಂಪರ್ಕ ಸ್ಪರ್ಶವಾಗಿದೆ.
                2)           ವೇದನಾ : ಆಗ ಉಂಟಾಗುವ ವೇದನೆಗಳು
                3)           ಸನ್ಯಾ : ಆಗ ಉಂಟಾಗುವ ಗ್ರಹಿಕೆಗಳು
                4)          ಚೇತನಾ : ಆಗ ಉಂಟಾಗುವಂತಹ ಇಚ್ಛೆ. ಇದನ್ನೇ ಭಗವಾನರು ಕಮ್ಮ ಎಂದು ಹೇಳುತ್ತಾರೆ. ಇಚ್ಛೆಯು ಸರ್ವ ಪಾಪಕ್ಕೆ, ಸರ್ವ ಪುಣ್ಯಕ್ಕೆ ಮೂಲ ಕಾರಣವಾಗಿದೆ. ಇದು ಸಂಖಾರಗಳಲ್ಲಿ ಪ್ರಧಾನವಾಗಿದೆ.
                5)         ಏಕಾಗ್ಗತಾ (ಏಕಾಗ್ರತೆ) : ಇದು ಚಿತ್ತದ ಏಕಾಗ್ರತೆಯಾಗಿದೆ. ಒಂದು ವಿಷಯದ ಮೇಲಿನ ಮನಸ್ಸು ಕೇಂದ್ರೀಕರಿಸಿ ಅದರಲ್ಲೇ ನೆಲೆಸುವಂತಹುದು ಆಗಿದೆ. ಇಲ್ಲಿ ಮನಸ್ಸು ಚದುರದೆ ಒಂದರಲ್ಲೇ ನೆಲೆಸುವಂತಹದಾಗಿದೆ. ಧ್ಯಾನಗಳಲ್ಲಿ ಇದು ಪ್ರಧಾನಪಾತ್ರ ವಹಿಸುತ್ತದೆ. ಸಾಧಾರಣ ವೇಳೆಯಲ್ಲಿಯೇ ಇದು ಪ್ರಮುಖ ಪಾತ್ರವಹಿಸುತ್ತದೆ. ಮತ್ತೊಂದು ವಿಷಯವೆಂದರೆ ಏಕಾಗ್ರತೆಯು ಒಳ್ಳೆಯ ವಿಷಯದ ಮೇಲೆ ಹರಿದಾಗ ಒಳ್ಳೆಯದೆ. ಆದರೆ ಕೆಟ್ಟ ವಿಷಯದ ಮೇಲೆ ನೆಲೆಸಿದಾಗ, ಅದು ಅತ್ಯಂತ ಕೆಟ್ಟದಾಗಿ ಪರಿಣಮಿಸುತ್ತದೆ.
                6) ಜೀವಿತಿಂದ್ರೀಯ : ಜೀವಿತ + ಇಂದ್ರೀಯ : ಜೀವಿತ ಎಂದರೆ ಸಹವತರ್ಿಗಳಿಗೆ ಆಧಾರವಾಗಿರುವುದು, ಜೀವಿಸುವುದು, ಇಂದ್ರೀಯ ನಿಯಂತ್ರಣದಲ್ಲಿರುವುದು. ಹೇಗೆ ಕಮಲಗಳು ನೀರಿನಿಂದ ಜೀವನ ಪಡೆಯುತ್ತವೆಯೋ, ಶಿಶುಗಳು ದಾದಿಯರಿಂದ ಪೋಷಣೆ ಪಡೆಯುತ್ತವೆಯೋ ಹಾಗೆಯೇ ಎಲ್ಲಾ ಚೇತಸಿಕಾಗಳಿಗೆ ಜೀವಿತಿಂದ್ರೀಯ ಜೀವ (ಪೋಷಣೆ) ನೀಡುತ್ತದೆ.

7.            ಮನಸಿಕಾರ : ಅಂದರೆ ಗಮನಹರಿಸುವುದು ಎಂದರ್ಥವಾಗಿದೆ. ಇಲ್ಲಿ ಮಾನಸಿಕ ಅಥವಾ ಇಂದ್ರೀಯಗಳ ವಿಷಯಗಳತ್ತ ಗಮನಹರಿಸುವುದೇ ಮನಸಿಕಾರವಾಗಿದೆ. ನಾವು ಗಮನಹರಿಸದಿದ್ದರೆ ಏನನ್ನೂ ನೋಡಲಾರೆವು, ಕೇಳಲಾರೆವು, ಅರಿಯಲಾರೆವು. ಇದರಲ್ಲಿ 2 ವಿಧವಿದೆ. ಯೊನಿಸೊ ಮನಸಿಕಾರ - ಜ್ಞಾನಯುತ ಗಮನಹರಿಸುವಿಕೆ ಮತ್ತು ಅಯೋನಿಸೋ ಮನಸಿಕಾರ - ಅಜ್ಞಾನಯುತ ಗಮನಹರಿಸುವಿಕೆ.

No comments:

Post a Comment

25 shobhana cetasikas in kannada ಶೋಭನ ಚೇತಾಸಿಕಾಗಳು

ಶೋಭನ ಚೇತಾಸಿಕಾಗಳು ( ಅಂದರೆ ಸುಂದರವಾದ ಮಾನಸಿಕಾ ಸ್ಥಿತಿಗಳು )                 25 ಶೋಭನ ಚೇತಸಿಕಾಗಳಿವೆ . ಅವು 4 ಭಾಗವಾಗಿ ವಗರ್ಿಕರಿಸಿದೆ . ...