Wednesday, 16 August 2017

14 Akusala cetasikas ಅಕುಶಲ ಚೇತಸಿಕಾಗಳು

 ಅಕುಶಲ ಚೇತಸಿಕಾಗಳ

:

14 ಅಕುಶಲ ಚೇತಸಿಕಾಗಳಿವೆ. ಅವು ನೈತಿಕವಾಗಿ ಪಾಪಯುತವಾಗಿರುವುದರಿಂದ ಅದನ್ನು ಅಕುಶಲ ಎನ್ನುತ್ತಾರೆ. ಅದನ್ನು ನಾಲ್ಕು ಭಾಗವಾಗಿ  ವಿಂಗಡಿಸಲಾಗಿದೆ.
1. ಮೋಹ - ಚತುಕ - ಅಕುಶಲ - ಸಾಧಾರಣ (1 ರಿಂದ 4)
2. ಲೋಭ - 3 ಪಾಪಂಚ - ಧಮ್ಮ (5 ರಿಂದ 7)
3. ದೊಸ - ಚತುಕ (8 ರಿಂದ 11)
4. ಕೊನೆಯ 3 ದಡ್ಡ ಮತ್ತು ಚಂಚಲಿಗರ ಗುಂಪು (12 ರಿಂದ 14)

1. ಮೋ : ಆರ್ಯಸತ್ಯಗಳ ನಿಜಸ್ವರೂಪದ ಅಜ್ಞಾನಕ್ಕೆ ಮೋಹವೆನ್ನುತ್ತಾರೆ. ಜೀವಿಗಳೆಲ್ಲವೂ ನಾಮ ಮತ್ತು ರೂಪದಿಂದ ಆಗಿವೆ. ಅವಕ್ಕೆ ನಾಲ್ಕು ಲಕ್ಷಣಗಳಿವೆ. 1. ಅನಿತ್ಯ 2. ದುಃಖ 3. ಅನಾತ್ಮ 4. ಅಶುಭಾ. ಆದರೆ ಮೋಹದಿಂದಾಗಿ ಅವುಗಳ ನಿಜಸ್ವರೂಪಕ್ಕೆ ಮುಸುಕು ಬೀಳುತ್ತದೆ.

ಹೀಗಾಗಿ ನಾವು ವಾಸ್ತವವನ್ನು ಅರಿಯಲಾಗದೆ ಗೊಂದಲಕ್ಕೆ ಬಿದ್ದು ಅದರ ವಿರುದ್ಧವಾದ ನಿತ್ಯ, ಸುಖ, ಆತ್ಮ ಮತ್ತು ಶುಭಾ (ಸುಂದರ) ಇವನ್ನೇ ನಿಜವೆಂದು ಭಾವಿಸುತ್ತೇವೆ. ಇದರಿಂದಾಗಿ ನಿರಂತರ ಜನ್ಮಗಳನ್ನು ತಾಳುತ್ತಾ ಇರುತ್ತೇವೆ.
ಮೋಹವು ಅಕುಶಲಗಳ ನಾಯಕ ಆಗಿದೆ. ಮೋಹದ ಜೊತೆಗಾರರಾದ (ಅಹಿರಿಕಾ, ಅನೊತ್ತಪ್ಪ ಮತ್ತು ಉದ್ದಚ್ಚ) ಮೋಹದೊಂದಿಗೆ ಸೇರಿ ಇವು ಎಲ್ಲಾ ಅಕುಶಲ ಚಿತ್ತಗಳೊಂದಿಗೆ ಇರುತ್ತವೆ. ಆದ್ದರಿಂದ ಇವಕ್ಕೆ ಅಕುಶಲ ಸಾಧಾರಣ ಎನ್ನುತ್ತೇವೆ.

ಮೋಹವು ಪ್ರಜ್ಞೆಗೆ ವಿರುದ್ಧವಾಗಿದೆ. ಇದನ್ನು ಅವಿದ್ಯೆ ಎಂದೂ ಕರೆಯುತ್ತಾರೆ. ಮೋಹವು ನಾಲ್ಕು ಆರ್ಯಗಳ ಮತ್ತು ಕರ್ಮ ವಿಪಾಕದ ಬಗ್ಗೆ ಮೋಹದ ಮುಸುಕು ಆವರಿಸುತ್ತದೆ.

2. ಅಹಿರಿಕಾ (ಪಾಪಲಜ್ಜೆ/ನಾಚಿಕೆ ಇಲ್ಲದಿರುವಿಕೆ): ಅಂದರೆ ಪಾಪಲಜ್ಜೆ ಇಲ್ಲದಿರುವಿಕೆ, ಇಲ್ಲಿ ವ್ಯಕ್ತಿಯು ಪಾಪಕೃತ್ಯಗಳು, ಪಾಪವಾಚಾ ಮತ್ತು ಪಾಪವನ್ನು ಯೋಚಿಸಲು ನಾಚಿಕೆ ಬೀಳುವುದಿಲ್ಲ. ಹೇಗೆ ಹಂದಿಯು ಹೊಲಸಿನಲ್ಲಿ ತಿಂದು ಉರುಳಾಡಲು ನಾಚಿಕೆ ಬೀಳುವುದಿಲ್ಲವೋ ಹಾಗೆಯೇ ಪಾಪಲಜ್ಜೆಯಿಲ್ಲದವನು ಪಾಪದಲ್ಲಿ ತಲ್ಲೀನನಾಗಲು ನಾಚಿಕೆ ಬೀಳುವುದಿಲ್ಲ.

3. ಅನೊತ್ತಪ್ಪ (ಪಾಪ ಭೀತಿಯಿಲ್ಲದಿರುವಿಕೆ) : ಇಲ್ಲಿ ವ್ಯಕ್ತಿಯು ಪಾಪ ಮಾಡಲು ಯಾವುದೇ ಭೀತಿಪಡಲಾರ. ಆತನಿಗೆ ನಿಂದಾಭಯವಾಗಲಿ, ಶಿಕ್ಷೆಯ ಭಯವಾಗಲಿ, ದುರ್ಗತಿಗೆ ಬಿದ್ದು ಸಾವಿನ ನಂತರ ಅನುಭವಿಸುವ ದುಃಖದ ಭೀತಿಯಾಗಲಿ ಇರುವುದಿಲ್ಲ.

ಇದರಿಂದ ಆತನು ಹೆಚ್ಚು ಪಾಪಿಯಾಗಿ ನಂತರ ಪಾಪ ವಿಪಾಕ ಅನುಭವಿಸುವಾಗ ದುಃಖಿತನಾಗುತ್ತಾನೆ. ಹೇಗೆ ಚಿಟ್ಟೆಯು ಬೆಂಕಿಯೆಡೆಗೆ ಧಾವಿಸಿ ಸುಟ್ಟು ಹೋಗುವುದೋ ಹಾಗೆಯೇ ಪಾಪಗಳಲ್ಲಿ ಭೀತನಾಗದವನು ದುರ್ಗತಿಯನ್ನು ಹೊಂದುತ್ತಾನೆ.

4. ಉದ್ದಚ್ : ಉದ್ದಚ್ಚವೆಂದರೆ ಅವಿಶ್ರಾಂತ ಮನಸ್ಸು ಅಥವಾ ಚದುರಿದ ಮನಸ್ಸು. ಬೂದಿಯ ಗುಡ್ಡೆಗೆ ಕಲ್ಲು ಬಿಸಾಡಿದರೆ ಹೇಗೆ ಚದುರುವುದೋ ಹಾಗೆಯೇ ಉದ್ದಚ್ಚ ಮನಸ್ಸಿನ ಸ್ಥಿತಿಯು ಇರುತ್ತದೆ. ಹೇಗೆ ನಾವು ಕುದಿಯುತ್ತಿರುವ ನೀರಿನಲ್ಲಿ ಮುಖವನ್ನು ಕಾಣಲಾರೆವೋ ಹಾಗೆಯೇ ಅವಿಶ್ರಾಂತ ಮನಸ್ಸು ಪಾಪಗಳ ಪರಿಣಾಮವನ್ನು ಕಾಣಲಾರದು. ಮೋಹದಿಂದ ಉದಯಿಸಿದ ಅವಿಶ್ರಾಂತ ಮನಸ್ಸು ಗೊಂದಲದಲ್ಲಿರುತ್ತದೆ ಮತ್ತು ಚದುರಿ ಹೋಗುತ್ತದೆ.

5. ಲೋ : ಲೋಭವೆಂದರೆ ಇಂದ್ರೀಯಗಳ ವಿಷಯಗಳಲ್ಲಿ ಅತಿಯಾಸೆಯಾಗಿದೆ. ಇಂದ್ರೀಯಗಳಲ್ಲಿ ತೃಪ್ತಿಯನ್ನು ತಾಳದಿರುವಿಕೆ ನನ್ನದು ಎಂದು ಬಾಧಿಸುವಿಕೆ ಇದರ ಸ್ವಭಾವಗಳಲ್ಲಿ ಒಂದಾಗಿದೆ. ಲೋಭಿಗಳಿಗೆ ಇಡೀ ಪೃಥ್ವಿಯನ್ನು ನೀಡಿದರೂ ಅವರಿಗೆ ತೃಪ್ತಿ ಇರುವುದಿಲ್ಲ. ಅವರಿಗೆ ಸದಾ ಹೊಸತು ಬೇಕು. ಹೊಸ ಬಗೆಯ ಸುಖಗಳು ಹುಡುಕುತ್ತಿರುತ್ತಾರೆ. ಎಲ್ಲಿಯವರೆಗೆ ಒಬ್ಬನು ಲೋಭವನ್ನು ತೆಗೆದು ಹಾಕುವುದಿಲ್ಲವೋ ಅಲ್ಲಿಯವರೆಗೆ ಒಬ್ಬನು ಸುಖವಾಗಿ ಇರಲಾರ. ಲೋಭದಿಂದ ಆತನು ಪ್ರಬಲವಾಗಿ ಇಂದ್ರೀಯ ವಿಷಯಗಳಿಗೆ ಅಂಟುತ್ತಾನೆ. ಪ್ರಬಲವಾದ ಅಂಟಿಗೆ ಸಿಕ್ಕಿಕೊಂಡು ಒದ್ದಾಡುವ ಕೋತಿಯ ಹಾಗೆ ಆತನು ಒದ್ದಾಡುತ್ತಾನೆ. ಹೀಗೆ ಲೋಭಿಗಳು ನನ್ನ ಪತ್ನಿ (ಪತಿ ನನ್ನ ಮಕ್ಕಳು, ನನ್ನ ಐಶ್ವರ್ಯ ಎಂದು ಅಂಟಿಕೊಂಡು ಜರಾಮರಣಗಳ ಜನ್ಮಕ್ಕೆ ಬಲಿಯಾಗಿ ಜನ್ಮದಿಂದ ಜನ್ಮಕ್ಕೆ ದುಃಖ ಸಾಗರದಲ್ಲಿ ಬೀಳುತ್ತಾನೆ. ಲೋಭ, ದಿಟ್ಠಿ ಮತ್ತು ಮಾನ (ಅಹಂಕಾರ)ವನ್ನು ಪ್ರಪಂಚ ಧರ್ಮ ಎನ್ನುತ್ತಾನೆ.

6. ದಿಟ್ಠಿ (ದೃಷ್ಟಿಕೋನ) : ಅಂದರೆ ಅಭಿಪ್ರಾಯ, ನಂಬಿಕೆ, ಸಿದ್ಧಾಂತ. ಇದರಲ್ಲಿ 2 ವಿಧವಿದೆ. ಸಮ್ಮಾದಿಟ್ಟಿ ಅಂದರೆ ಯೋಗ್ಯವಾದ ದೃಷ್ಟಿಕೋನ, ಇದು ಕುಶಲವಾಗಿದೆ. ಆದರೆ ಇಲ್ಲಿರುವುದು ಮಿಥ್ಯದೃಷ್ಟಿಕೋನ (ದಿಟ್ಟಿ). ಇಲ್ಲಿ ಮಾನವರು ಮೋಹದಿಂದ ಆವೃತನಾಗಿ ಅನಿತ್ಯವನ್ನು ನಿತ್ಯವೆಂದು ದುಃಖವನ್ನು ಸುಖವೆಂದು ಮತ್ತು ಅನಾತ್ಮವನ್ನು ಆತ್ಮವೆಂದು ಭಾವಿಸಿ ನಂಬುತ್ತಾನೆ. ಇಲ್ಲಿ ಆತನು ಸಕ್ಕಾಯ ದಿಟ್ಟಿ ಅಂದರೆ ದೇಹ ಮತ್ತು ಮನಸ್ಸಿಗೆ ನನ್ನದು, ನಾನು ಅಥವಾ ನನ್ನ ಆತ್ಮ ಎಂದು ಭಾವಿಸುತ್ತಾನೆ. ಇದನ್ನು ನಾಶಗೊಳಿಸಿದಾಗಲೇ ಆತನು ಸೋತಪನ್ನನಾಗುತ್ತಾನೆ.

7. ಮಾನ (ಅಹಂಕಾರ) : ಎಂದರೆ ಇದು ಅಹಂಕಾರಕ್ಕೆ ಪರ್ಯಾಯ ಪದವಾಗಿದೆ. ಆತನು ಸದಾ ನಾನೇ ಶ್ರೇಷ್ಠ, ನಾನೇ ಹೆಚ್ಚಾಗಿ ತಿಳಿದಿರುವುದು, ನನಗೆ ಲೋಕದಲ್ಲಿ ಸಮಾನರಿಲ್ಲ ಎಂದು ಅಹಂಕಾರದಿಂದ ಬೀಗುತ್ತಿರುತ್ತಾನೆ.
ಅಹಂಕಾರವು 3 ವಿಧದ್ದಾಗಿದೆ. ಅ) ಅತಿಮಾನ-ನಾನೇ ಶ್ರೇಷ್ಠ, ಆ) ಮಾನ-ನಾವೆಲ್ಲರೂ ಸಮಾನ, ಇ) ಒಮಾನ-ನಾನು ಕೀಳು (ನಾನು ದುರ್ಬಲ) ಕೀಳರಿಮೆ ಇತ್ಯಾದಿ.  ಆದರೆ ಯಾವುದೇ ಅಹಂಕಾರವಿರಲಿ ಅದು ಬೀಳುವಂತಹುದೇ, ಅಹಂಕಾರವು ಹೊಗಳುವಂತಹ ಶೀಲವಲ್ಲ.
ಇದು 10 ಬಂಧನಗಳಲ್ಲಿ ಒಂದಾಗಿದೆ. ಅರಹಂತರಲ್ಲಿ ಇದು ನಶಿಸುತ್ತದೆ.

8. ದೋ : ಕೋಪ, ದ್ವೇಷ ಇತ್ಯಾದಿ. ಈ ಕೋಪವು ಆಟಂಬಾಂಬಿಗಿಂತ ನಾಶಕಾರಿಯಾದ ಧಾತುವಾಗಿದೆ. ಏಕೆಂದರೆ ಇಂತಹ ದ್ವೇಷ, ಕೋಪವುಳ್ಳವನೇ ಇದನ್ನು ಬಳಸುತ್ತಾನೆ. ಅಪ್ರಿಯವಾದ ವಿಷಯವನ್ನು ಸಮೀಪಿಸಿದಾಗ ದ್ವೇಷವು, ಕೋಪವು ಉದಯಿಸುತ್ತದೆ.
ಇಲ್ಲಿ ದೋಷವನ್ನು ಚಿಂತಾಕೃತ, ಭಯವುಳ್ಳವನಿಗೂ ಬಳಸುತ್ತಾರೆ. ಏಕೆಂದರೆ ಇದನ್ನು ಅಪ್ರಿಯ ವೇದನೆಗಳಲ್ಲಿ ಇವೆರಡೂ ಬರುವುದರಿಂದ ಹಾಗೆ ಅಳತೆ ಮಾಡುತ್ತಾರೆ. ಅಭಿಧಮ್ಮದ ಪ್ರಕಾರ ಸೇಡು ನಿಂದನೆಗಿಂತ ಹೆಚ್ಚು ಹಾನಿಕಾರವು, ನಿಂದನೀಯವಾದುದು. ಸೇಡಿನ ಗುಣವನ್ನು ಕೋಪಕ್ಕಿಂತ ಹೆಚ್ಚು ಪಾಪಮಯ ಎಂದಿದ್ದಾರೆ.

9. ಈಸ್ಸಾ (ಈಷರ್ೆ) : ಇದು ಹೊಟ್ಟೆಕಿಚ್ಚಿನ ಗುಣವಾಗಿದೆ. ಇದರಿಂದ ಆತುರ, ಉನ್ನತಿ ಹೊಂದುತ್ತಿರುವ ಪರರನ್ನು ಕಂಡು ಈಷರ್ೆಪಡುತ್ತಾನೆ. ಅವರಲ್ಲಿ ಆನಂದಿಸುವುದಿಲ್ಲ. ಇದು ವೈಯಕ್ತಿಕ ಮಟ್ಟದಿಂದ ಹಿಡಿದು, ಸಾಮಾಜಿಕ, ಕ್ರೀಡಾ, ಶಿಕ್ಷಣ, ವ್ಯಾಪಾರ, ರಾಜಕೀಯ, ಲಿಂಗ, ರಾಜ್ಯ ರಾಷ್ಟ್ರಮಟ್ಟದಲ್ಲೇ ಅಷ್ಟೇ ಅಲ್ಲ, ಧರ್ಮದವರಿಗೂ ಇದು ಹಬ್ಬುತ್ತಾ ಬಂದಿದೆ. ಇದು ಅತ್ಯಂತ ತುಚ್ಛ ಗುಣವಾಗಿದೆ. ಸೋಮಾರಿಗಳಲ್ಲಿ, ಅನರ್ಹರಲ್ಲಿ ಉಂಟಾಗುವ ಗುಣವಾಗಿದೆ. ಮುದಿತಾ ಧ್ಯಾನದಿಂದ ಇದರ ಅಂತ್ಯವಾಗುತ್ತದೆ.

10. ಮಚ್ಚರಿಯ (ಸ್ವಾರ್ಥ) : ಇಲ್ಲಿ ಆತನು ತನ್ನದು ಎಂಬ ಭಾವವನ್ನು ಬೆಳೆಸಿಕೊಂಡಿರುತ್ತಾನೆ. ತನ್ನ ಮನೆ, ತನ್ನ ಕುಟುಂಬ, ತನ್ನ ಐಶ್ವರ್ಯ, ತನ್ನ ಕೀತರ್ಿ, ತನ್ನ ಜ್ಞಾನ ಅಥವಾ ತನ್ನ ಮಕ್ಕಳು, ತನ್ನ ಪತ್ನಿ, ಹೀಗೆ ಆತನು ನನ್ನದು ಎಂಬುದಕ್ಕೆ ಪ್ರಬಲವಾಗಿ ಅಂಟಿ ಅದನ್ನು ಬೇರೆಯವರಲ್ಲಿ ಹಂಚಲಾರ. ಹೀಗೆ ತನ್ನದಲ್ಲದುದಕ್ಕೆ ಅಂಟಿ ಆತನು ದುಃಖಿಸುತ್ತಾನೆ. ಅದಕ್ಕೆ ಧಕ್ಕೆಯಾದರೆ ಕೋಪ ಮತ್ತು ದುಃಖವನ್ನು ಅನುಭವಿಸುತ್ತಾನೆ.

11. ಕುಕ್ಕುಚ್ : ಅಂದರೆ ಪಶ್ಚಾತ್ತಾಪ. ಇಲ್ಲಿ ಆತನು ಮಾಡಿದ ಪಾಪವನ್ನು ನೆನೆದು ದುಃಖಿಸುತ್ತಾನೆ ಅಥವಾ ಮಾಡದೆ ಇರುವ ಸಾಧನೆ ಬಗ್ಗೆ ಚಿಂತಿಸಿ ದುಃಖಿಸುತ್ತಾನೆ. ಇದರಿಂದಾಗಿ ಯಾವುದೇ ಫಲವಿಲ್ಲದೆ ಇರುವುದರಿಂದಾಗಿ ಅದನ್ನು ಬಿಡುವುದು ಒಳ್ಳೆಯದು. ಈಷರ್ೆ, ಸ್ವಾರ್ಥ ಮತ್ತು ಪಶ್ಚಾತ್ತಾಪ ದೋಸದ ಗುಂಪಿಗೆ ಸೇರುತ್ತದೆ.

12. ಥೀನ : ಎಂಬುದು ಮುದುಡಿದ ಮನಸ್ಥಿತಿಯಾಗಿದೆ. ಯಾವಾಗ ಒಬ್ಬನು ಪ್ರಯತ್ನಶೀಲನಾಗಿರುವುದಿಲ್ಲವೋ ಆಗ ಆತನು ಈ ಸೋಮಾರಿತನದ ಚಿತ್ತಕ್ಕೆ ವಶವಾಗಿರುತ್ತಾನೆ. ಇದನ್ನು ಚಿತ್ತದ ರೋಗ ಎಂದು ಹೇಳುತ್ತಾರೆ.

13. ಮಿದ್ಧ : ಇದು ಜಡತ್ವದ ಸ್ಥಿತಿಯಾಗಿದೆ. ಯಾವಾಗ ಒಬ್ಬನು ಜಡತ್ವವನ್ನು ಅನುಭವಿಸುತ್ತಾನೋ ಆಗ ಆತನು ಮಿದ್ಧದಿಂದ ವಶವಾಗಿರುತ್ತಾನೆ. ಇದು ಚೇತಸಿಕಾಗಳಲ್ಲೇ ರೋಗವೆಂದು ಹೇಳುತ್ತಾರೆ.

14. ವಿಚಿಕಿಚ್ಚಾ (ವಿಚಿಕಿತ್ಸೆ/ಸಂಶಯ/ದ್ವಂದ್ವತೆ/ಅನಿಧರ್ಾರ) : ಇಲ್ಲಿ ಸಂಶಯವೆಂದರೆ ಬುದ್ಧರಲ್ಲಿ, ಧಮ್ಮದಲ್ಲಿ, ಸಂಘದಲ್ಲಿ, ಶೀಲದಲ್ಲಿ, ಸಮಾಧಿಯಲ್ಲಿ, ಪ್ರಜ್ಞಾದಲ್ಲಿ ಸಂಶಯಿಸುವುದು. ಹಾಗೆಯೇ ಭೂತಕಾಲದ ಬಗ್ಗೆ, ಭವಿಷ್ಯದ ಬಗ್ಗೆ ಮತ್ತು ವರ್ತಮಾನದ ಬಗ್ಗೆ, ಪಟಿಚ್ಚ ಸಮುಪ್ಪಾದದ ಬಗ್ಗೆ ಹಾಗು ಚತುರ್ ಆರ್ಯ ಸತ್ಯಗಳ ಬಗ್ಗೆ ಸಂಶಯಿಸುವುದು.

ಇದು ಧ್ಯಾನಕ್ಕೆ ಸಹಾ ಅಡ್ಡಿಯಾಗಿದೆ. ಆದರೆ ಧ್ಯಾನದಲ್ಲಿ ಇವು ತಾತ್ಕಾಲಿಕವಾಗಿ ನಾಶವಾಗುವವು ಮತ್ತು ಸೋತಪನ್ನದಲ್ಲಿ ಇವು ಪೂರ್ಣವಾಗಿ ನಾಶವಾಗುವುವು. ದಶಬಂಧನಗಳಲ್ಲಿ ಇದು ಒಂದಾಗಿದೆ.

No comments:

Post a Comment

25 shobhana cetasikas in kannada ಶೋಭನ ಚೇತಾಸಿಕಾಗಳು

ಶೋಭನ ಚೇತಾಸಿಕಾಗಳು ( ಅಂದರೆ ಸುಂದರವಾದ ಮಾನಸಿಕಾ ಸ್ಥಿತಿಗಳು )                 25 ಶೋಭನ ಚೇತಸಿಕಾಗಳಿವೆ . ಅವು 4 ಭಾಗವಾಗಿ ವಗರ್ಿಕರಿಸಿದೆ . ...