Tuesday, 8 August 2017

6 pakinnaka cetasikas ಆರು ಪಕಿಣ್ಣಕ ಚೇತಸಿಕಾಗಳು in kannada

2.      ಆರು ಪಕಿಣ್ಣಕ ಚೇತಸಿಕಾಗಳು :

                1.            ವಿತಕ್ಕ : ವಿತಕ್ಕವು ಚಿತ್ತಕ್ಕೆ ಅದರ ವಿಷಯಗಳತ್ತ ಪರಿಚಯಿಸುತ್ತದೆ, ಕೊಂಡೊಯ್ಯುತ್ತದೆ. ಇದು ನಾನಾ ವಿಷಯಗಳತ್ತ ಕೇಂದ್ರೀಕರಿಸುವುದರಿಂದಾಗಿ ಇದಕ್ಕೆ ವಿತರ್ಕ ಎನ್ನುತ್ತಾರೆ. ಯೋಚನೆ ಎಂದು ಕರೆಯುತ್ತಾರೆ.
                ವಿತಕ್ಕ, ಮನಸಿಕಾರ ಮತ್ತು ಚೇತನಾ ನೋಡಲು ಒಂದೇರೀತಿ ಕಂಡುಬಂದರೂ 3 ವಿಭಿನ್ನವಾಗಿದೆ. ಉದಾಹರಣೆಯಿಂದ ಅದು ಸ್ಪಷ್ಟವಾಗುತ್ತದೆ. ದೋಣಿಯ ಸ್ಪಧರ್ೆಯಲ್ಲಿ ಮೂವರು ಭಾಗವಹಿಸುತ್ತಾರೆ. ಇದರಲ್ಲಿ ಮನಸಿಕಾರನು ಚುಕ್ಕಾಣಿ ಹಿಡಿದು ನಿಯಂತ್ರಿಸುವವನು ಆಗಿದ್ದಾನೆ. ವಿತಕ್ಕ ಇಲ್ಲಿ ದೋಣಿಯ ಹೊಂದಿಕೆ ಪಂಕ್ತಿಯಲ್ಲಿರುವವ ಆಗಿದ್ದಾನೆ. ಆದರೆ ಚೇತನ (ಇಚ್ಛೆ )ಇಲ್ಲಿ ಅಗ್ರ ದೋಣಿ ಚಾಲಕನು ಅಷ್ಟೇ ಅಲ್ಲದೆ ಪರರನ್ನು ಪ್ರೋತ್ಸಾಹಿಸುವವನು ಆಗಿದ್ದಾನೆ, ಯಶಸ್ವಿಯು ಆಗಿದ್ದಾನೆ.
                ವಿತಕ್ಕವು ಧ್ಯಾನಂಗಗಳಲ್ಲಿ ಒಂದಾಗಿದೆ. ಇದು ಅಲಸ್ಯ ಮತ್ತು ಜಡತ್ವವನ್ನು ನಾಶಗೊಳಿಸುತ್ತದೆ. ಅಭಿವೃದ್ಧಿಗೊಳಿಸಿದಾಗ ಇದು ಪ್ರಮುಖವಾದ ಧ್ಯಾನದ ಅಂಗವಾಗಿದೆ.
                ಹಾಗೆಯೇ ಯೋಗ್ಯರೀತಿಯ ಚಿಂತನೆಗಳಲ್ಲಿದ್ದಾಗ ವಿತಕ್ಕಕ್ಕೆ ಸಮ್ಮಾಸಂಕಪ್ಪ (ಸಂಕಲ್ಪ) ಎನ್ನುತ್ತಾರೆ.

2.            ವಿಚಾರ : ವಿಚಾರವು ಚಿತ್ತಕ್ಕೆ ಮತ್ತು ಅದರ ವಿಷಯಗಳಿಗೆ ಬೆಂಬಲವಾಗಿರುತ್ತದೆ. ಇದು ವಸ್ತು ವಿಷಯದ ಮೇಲೆ ಪದೇಪದೇ ಪರೀಕ್ಷಿಸುತ್ತಾ ಇರುವಂತಹ ಗುಣವನ್ನು ಪಡೆದಿದೆ. ವಿತಕ್ಕದಂತೆಯೇ ಇದು ಸಹಾ ಧ್ಯಾನದ ಅಂಗವಾಗಿದೆ. ಇದು ಸಂಶಯಗಳನ್ನು ನಿಲ್ಲಿಸುತ್ತದೆ, ನಿವಾರಿಸುತ್ತದೆ. ವಿತಕ್ಕವನ್ನು ವಿಚಾರವೂ ಹಿಂಬಾಲಿಸುತ್ತದೆ. ಹೇಗೆಂದರೆ: ಗಂಟೆಯ ಶಬ್ದವು ವಿತಕ್ಕವಾದರೆ ನಂತರದ ಕಂಪನಗಳು ವಿಚಾರವಾಗಿದೆ.

3.            ಅಧೀಮೋಕ್ಖ : ಅಧಿಮೋಕ್ಖವು ಇಂದ್ರೀಯ ವಿಷಯದ ಬಗ್ಗೆ ನಿಧರ್ಾರ ಕೈಗೊಳ್ಳುತ್ತದೆ. ಇದು ನ್ಯಾಯಾಧೀಶನಂತೆ ಕಾರ್ಯವಹಿಸುತ್ತದೆ. ನಿಧರ್ಾರ ಕೈಗೊಳ್ಳುವಲ್ಲಿ ಇದು ದೃಢ ಸ್ತಂಭದಂತೆ. ಇದು ಅನಿಧರ್ಾರಕ್ಕೆ (ಸಂಶಯ (ವಿಚಿಕಿಚ್ಚಾ)ಕ್ಕೆ ವಿರೋಧಿಯಾಗಿದೆ.

4.            ವೀರಿಯ (ವೀರ್ಯ/ಪ್ರಯತ್ನಶೀಲತೆ) : ಇದು ಯತ್ನಶೀಲತೆಯಾಗಿದೆ, ವೀರವಂತಿಕೆಯಾಗಿದೆ. ಪರಾಕ್ರಮವಾಗಿದೆ. ಇದನ್ನು ಧೈರ್ಯಯುತ ದೃಢ ಪ್ರಯತ್ನಶೀಲತೆಗೆ ಹೇಳಲಾಗುತ್ತದೆ. ಇದರ ಲಕ್ಷಣವೇನೆಂದರೆ ಆಧಾರವಾಗಿರುವಿಕೆ, ಕ್ರಿಯಾಶೀಲತೆ, ಬಾಗುತ್ತಿರುವ ಮನೆಗೆ ಹೊಸ ಸ್ತಂಭಗಳನ್ನು ಆಧಾರ ನೀಡಿ ನಿಲ್ಲಿಸುವಂತೆ ವ್ಯಕ್ತಿತ್ವಕ್ಕೆ ಆಧಾರವಾಗಿದೆ. ಇದು ಮುನ್ನಡೆಸುವಂತಹ ಕಾರ್ಯ ಮಾಡುತ್ತದೆ ವಿನಃ ಹಿನ್ನಡೆಯಲ್ಲ.

                ಇದನ್ನು 5 ಇಂದ್ರೀಯಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಏಕೆಂದರೆ ಇದು ಸೋಮಾರಿತನವನ್ನು ಸೋಲಿಸಿ ನಿಯಂತ್ರಿಸುತ್ತದೆ. ಇದನ್ನು ಪಂಚ ಬಲಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಏಕೆಂದರೆ ಇವರ ವಿರೋಧಿಯಾದ ಸೋಮಾರಿತನವು ಪ್ರಯತ್ನಶೀಲತೆಯನ್ನು ಅಲುಗಾಡಿಸಲಾಗುವುದಿಲ್ಲ. ಇದನ್ನು ನಾಲ್ಕು ಇದ್ಧಿಪಾದಗಳಲ್ಲಿ ಒಂದೆಂದು ಹೇಳುತ್ತಾರೆ. ಏಕೆಂದರೆ ಇದು ಸಿದ್ಧಿಯ ಆಧಾರವಾಗಿದೆ. ಇದು ಅಷ್ಟಾಂಗ ಮಾರ್ಗಗಳಲ್ಲಿಯೂ ಒಂದಾಗಿದೆ. (ಸಮ್ಮಾ ವ್ಯಾಯಾಮ) ಅಷ್ಟೇ ಅಲ್ಲ, ಇದು ಸಪ್ತಬೋಧಿ ಅಂಗಗಳಲ್ಲಿಯೂ ಒಂದಾಗಿದೆ. ಅಟ್ಟ ಸಾಲಿನಿಯ ಪ್ರಕಾರ ವೀರ್ಯವನ್ನು ಸರ್ವ ಯಶಸ್ಸುಗಳ ಬೇರು (ಮೂಲ) ಎಂದು ಕರೆಯುತ್ತಾರೆ.

5.            ಪೀತಿ : ಇದು ಆನಂದವಾಗಿದೆ, ಇದನ್ನು ಉತ್ಸಾಹವೆಂದು ಕರೆಯುತ್ತಾರೆ. ಆದರೆ ಇದು ವೇದನಾವಲ್ಲ, ಚೇತಸಿಕಾವಾಗಿದೆ. ಇದು ಸುಖದ ಹಿಂದಿನ ಅವಸ್ಥೆಯಾಗಿದೆ. ಒಂದು ಸರೋವರವನ್ನು ವೀಕ್ಷಿಸುವುದು ಆನಂದವಾದರೆ ಅದರಲ್ಲಿ ನೀರು ಕುಡಿದು ಸ್ನಾನ ಮಾಡುವುದು ಸುಖವಾಗಿದೆ. ಇದರಲ್ಲಿ 5 ವಿಧ ಖುದ್ಧಕ, ಕ್ಷಣಿಕ, ಒಕ್ಕಾಂತಿಕ, ಉಬ್ಬೆಗ, ಫಾರಣ ಪೀತಿಗಳು.


6.            ಚಂದ : ಇದನ್ನು ಇಚ್ಛಾಶಕ್ತಿ, ಇಚ್ಛೆ ಎನ್ನುತ್ತಾರೆ. ಕ್ರಿಯೆಗೆ ಸಂಕಲ್ಪಶಕ್ತಿ ಅಥವಾ ಮಾಡುವ ಇಚ್ಛೆ ಎನ್ನುತ್ತಾರೆ. ಆದರೆ ನೆನಪಿಡಿ, ಇದರಲ್ಲಿ ಲೋಭವಿರುವುದಿಲ್ಲ, ಇದು ತಟಸ್ಥವಾಗಿದೆ. ಕಾಮಛಂದ ಮತ್ತು ಚಂದರಾಗವಲ್ಲ. ಇವೆರಡು ಲೋಭದಿಂದ ಕೂಡಿದೆ. ಪ್ರತಿಯೊಂದು ಕ್ರಿಯೆಯು ಚಂದದಿಂದ (ಇಚ್ಛೆ)ಯಾಗಿದೆ. ಇಚ್ಛೆಯಿಲ್ಲದೆ ನಾವೆಲ್ಲೂ ಹೋಗುವಂತಿಲ್ಲ. ಸಾಧಿಸುವಂತಿಲ್ಲ. ಇಚ್ಛೆಯಿದ್ದಲ್ಲಿ ಮಾರ್ಗವಿರುತ್ತದೆ. ಆದ್ದರಿಂದಲೇ ಇಚ್ಛೆಯನ್ನು ಸಿದ್ಧಿಯ 4 ಆಧಾರಗಳಲ್ಲಿ ಒಂದೆಂದು ಹೇಳುತ್ತಾರೆ

No comments:

Post a Comment

25 shobhana cetasikas in kannada ಶೋಭನ ಚೇತಾಸಿಕಾಗಳು

ಶೋಭನ ಚೇತಾಸಿಕಾಗಳು ( ಅಂದರೆ ಸುಂದರವಾದ ಮಾನಸಿಕಾ ಸ್ಥಿತಿಗಳು )                 25 ಶೋಭನ ಚೇತಸಿಕಾಗಳಿವೆ . ಅವು 4 ಭಾಗವಾಗಿ ವಗರ್ಿಕರಿಸಿದೆ . ...