Wednesday, 23 August 2017

25 shobhana cetasikas in kannada ಶೋಭನ ಚೇತಾಸಿಕಾಗಳು

ಶೋಭನ ಚೇತಾಸಿಕಾಗಳು (ಅಂದರೆ ಸುಂದರವಾದ ಮಾನಸಿಕಾ ಸ್ಥಿತಿಗಳು)

                25 ಶೋಭನ ಚೇತಸಿಕಾಗಳಿವೆ. ಅವು 4 ಭಾಗವಾಗಿ ವಗರ್ಿಕರಿಸಿದೆ
.
                1.            19 ಶೋಭನ ಸಾಧಾರಣ (ಇವು ಎಲ್ಲಾ ಶೋಭನ ಚಿತ್ತಗಳಲ್ಲಿರುತ್ತದೆ)
                2.            3 ವಿರತಿ; ಇವು ಶೀಲವಂತರ ಬಳಿಯಲ್ಲಿರುತ್ತದೆ.
                3.            2 ಅಪ್ಪಮಾನ್ಯ; ಇವು ಸೀಮಾತೀತ ಸ್ಥಿತಿಗಳಾದ ಕರುಣೆ ಮತ್ತು ಮುದಿತಾ ಸ್ಥಿತಿಗಳಾಗಿವೆ.
                4.            ಪನ್ಯಿಂದ್ರಿಯಾ; ಇದು ಪ್ರಜ್ಞೆಗೆ ಸಂಬಂಧಪಟ್ಟಿದೆ.

1.      ಶೋಭನ ಸಾಧಾರಣ :

                1. ಸದ್ದಾ (ಶ್ರದ್ಧಾ) : ಇಲ್ಲಿ ಸದ್ದಾ ಎಂದರೆ ತ್ರಿರತ್ನಗಳಾದ ಬುದ್ಧ, ಧಮ್ಮ ಮತ್ತು ಸಂಘಗಳ ಬಗ್ಗೆ ಸುಪ್ರತಿಷ್ಠಿತ ಶ್ರದ್ಧೆಯಾಗಿದೆ (ನಂಬಿಕೆ). ಇಲ್ಲಿ ಆತನಿಗೆ ಅಂಧಶ್ರದ್ಧೆ ಇರುವುದಿಲ್ಲ. ಸದಾ ಅನ್ವೇಷಿತ ಶ್ರದ್ಧೆಯಾಗಿರುತ್ತದೆ. ಇಲ್ಲಿ ಆತನು ಪ್ರತಿಯೊಂದನ್ನು ಪರೀಕ್ಷಿಸಿ, ವಿಶ್ಲೇಷಿಸಿ, ವಿಚಾರಿಸಿ, ತಕರ್ಿಸಿ, ಚಿಂತಿಸಿ ನಂತರ ಒಪ್ಪಿ ಸ್ವೀಕರಿಸಿರುತ್ತಾನೆ.

                ಎಲ್ಲಿ ಶ್ರದ್ಧೆಯಿರುವುದೋ ಅಲ್ಲಿ ಲೋಭ, ದೊಸ ಮತ್ತು ಮೋಹಗಳು ಮಾಯವಾಗುವುವು. ಆತನು ತ್ರಿರತ್ನದಲ್ಲಿ ಶ್ರದ್ಧೆಯಿರಿಸಿ ಅಪಾರ ಪುಣ್ಯ ಗಳಿಸಿರುತ್ತಾನೆ.
                ಹೇಗೆ ಮೋಹವು ಅಕುಶಲ ಚೇತಸಿಕಾಗಳಿಗೆ ನಾಯಕವೋ ಹಾಗೆಯೇ ಶ್ರದ್ಧಾವು ಕುಶಲ ಚೇತಸಿಕಾಗಳಿಗೆ ನಾಯಕವಾಗಿವೆ. ಇದು ಅತ್ಯಮೂಲ್ಯ ಅನರ್ಘ ಐಶ್ವರ್ಯದಂತೆ. ಆದ್ದರಿಂದ ಜ್ಞಾನಿಗಳು ಸದಾ ಇದನ್ನು ವೃದ್ಧಿಗೊಳಿಸುತ್ತಾರೆ.
                ಶ್ರದ್ಧಾವು ಪಂಚಬಲಗಳಲ್ಲಿ ಮತ್ತು ಪಂಚ ಇಂದ್ರೀಯಗಳಲ್ಲಿ ಒಂದಾಗಿದೆ.

2.            ಸತಿ (ಸ್ಮೃತಿ) : ಸ್ಮೃತಿ (ಸತಿ)ಯು ನಡೆಯುತ್ತಿರುವ ವಿಷಯಗಳ ಬಗ್ಗೆ ಜಾಗೃತಿ ಹೊಂದಿರುವುದು ಆಗಿದೆ. ಸ್ಮೃತಿಯ ಪ್ರಧಾನ ಲಕ್ಷಣ ಏನೆಂದರೆ ಯಾವುದೇ ವಿಷಯವು ಗಮನಕ್ಕೆ (ನೋಟ) ಬಾರದೆ ಹೋಗದಿರುವುದು. ಒಬ್ಬನು ಸಾಕಷ್ಟು ಜಾಗೃತನಾಗದಿದ್ದರೆ ಆಗ ಆತನಿಗೆ ನೋಡಿದ್ದು ಅಥವಾ ಕೇಳಿದ್ದು ನೆನಪು ಬರುವುದಿಲ್ಲ.
                ಸ್ಮೃತಿ (ಜಾಗರೂಕತೆ/ನೆನಪು)ಯನ್ನು ಶ್ರೇಷ್ಟ ಮಟ್ಟದಲ್ಲಿ ಬೆಳೆಸಿದಾಗ ಒಬ್ಬನು ಹಿಂದಿನ ಜನ್ಮಗಳನ್ನು ನೆನಪಿಸಿಕೊಳ್ಳಬಹುದು. ಹಾಗಾಗಿ ಸ್ಮೃತಿಯು ನೆನಪಿನಂತೆಯು ಕ್ರಿಯೆ ವಹಿಸುತ್ತದೆ. ನಾವು ದಿನನಿತ್ಯದ 6 ಇಂದ್ರೀಯಗಳು ಚಟುವಟಿಕೆಗಳನ್ನು ನೆನಪಿಸಿಕೊಳ್ಳುವ ಹಾಗೆಯೇ ತಿದ್ದಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು.
                ಜಾಗರೂಕ ದ್ವಾರಪಾಲಕನು ಕಳ್ಳರನ್ನು ಕೋಟೆಯೊಳಗೆ ನುಸುಳದಂತೆ ನೋಡಿಕೊಳ್ಳುವಂತೆ ಜಾಗರೂಕತೆಯನ್ನು ಅಭ್ಯಾಸಿಸುವ ಧ್ಯಾನಿಯು ಅಕುಶಲ ಚೇತಸಿಕಾಗಳನ್ನು ಹುಟ್ಟದಂತೆ ನೋಡಿಕೊಳ್ಳುತ್ತಾನೆ.
                ಸ್ಮೃತಿಯು ಪಂಚಬಲಗಳಲ್ಲಿ ಒಂದಾಗಿದೆ. ಸ್ಮೃತಿಯು ಪಂಚ ಇಂದ್ರೀಯಗಳಲ್ಲಿ ಒಂದಾಗಿದೆ. ಸಪ್ತಬೋಧಿ ಅಂಗಗಳಲ್ಲಿ ಒಂದಾಗಿದೆ. ಹಾಗೆಯೇ ಆರ್ಯ ಅಷ್ಟಾಂಗ ಮಾರ್ಗದಲ್ಲಿ ಒಂದಾಗಿದೆ.

3.            ಹಿರಿ : ಪಾಪಲಜ್ಜೆಯು ಮಾನವನಿಗೆ ಪಾಪಗಳಿಂದ ಹಿಂಜರಿಯುವಂತೆ ಮಾಡುತ್ತದೆ. ಯಾವುದರಲ್ಲಿ ಲಜ್ಜೆಯಿರಬೇಕೋ ಅಂತಹವುಗಳಿಂದ ಲಜ್ಜೆಯಿದ್ದು ಪಾಪಗಳಿಂದ ಅಕುಶಲ ಕರ್ಮಗಳಿಂದ ದೂರವಾಗುತ್ತಾನೆ. ಹಿರಿಯು ಅಹಿರಿಗೆ ನಿರೋಧಿಸುತ್ತದೆ.
4.            ಒತ್ತಪ್ಪ (ಪಾಪಭೀತಿ) : ಒತ್ತಪ್ಪವು ಪಾಪಭೀತಿಯಾಗಿದೆ. ಇದು ಇರುವುದರಿಂದಾಗಿ ಆತನಿಗೆ ಪಾಪದ ಪರಿಣಾಮಗಳು ಅರಿವಿಗೆ ಬಂದು ಪಾಪದಿಂದ ಪಾರಾಗುತ್ತಾನೆ. ಆದರೆ ಇದು ಕೇವಲ ಪಾಪಭೀತಿಯಾಗಿದೆ. ಅಂದರೆ ಪಾಪಮಾಡಲು ಹೆದರಿಕೆ ಉಳಿದಂತೆ ಆತನು ಧೈರ್ಯಶಾಲಿಯಾಗಿರುತ್ತಾನೆ. ಆತನು ಯಾವುದಕ್ಕೂ, ಯಾರಿಗೂ ಹೆದರುವುದಿಲ್ಲ.
                2 ಕಬ್ಬಿಣದ ಸಲಾಕೆಗಳಿಗೆ ಒಂದರಲ್ಲಿ ಮಲವನ್ನು ಸಿಕ್ಕಿಸಿ, ಇನ್ನೊಂದರಲ್ಲಿ ಕೆಂಪಗೆ ಕಾಯಿಸಿ ಹತ್ತಿರ ಹಿಡಿದು ಮುಟ್ಟಲು ಹೇಳಿದಾಗ ಬುದ್ಧಿವಂತರು ಎರಡನ್ನೂ ಮುಟ್ಟಲಾರರು. ಮೊದಲನೆಯದು ಅಸಹ್ಯಪಡುವುದರಿಂದ, ಎರಡನೆಯದು ಭಯದಿಂದ. ಅದೇರೀತಿಯಲ್ಲಿ ಪಾಪಲಜ್ಜೆ ಎಂದರೆ ಪಾಪದಿಂದ ಅಸಹ್ಯಪಡುವುದರಿಂದ, ಪಾಪಭೀತಿ ಎಂದರೆ ಮುಂದೆ ಶಿಕ್ಷೆ ಆಗುವುದು, ಅವಮಾನವಾಗುವುದು. ಅಥವಾ ಕರ್ಮಫಲ ವಿಪಾಕವಾಗುವುದು ಎಂದು ಅರಿತು ಪಾಪ ಮಾಡುವುದಿಲ್ಲ. ಪಾಪಲಜ್ಜೆ ಮತ್ತು ಪಾಪಭೀತಿ ಇವೆರಡು ಲೋಕಪಾಲ ಧಮ್ಮಗಳಾಗಿವೆ.

5.            ಅಲೋಭ : ಇಂದ್ರೀಯ ವಿಷಯಗಳಿಗೆ ಅಂಟದೆ ಇರುವುದು ಮತ್ತು ಅಲೋಭಿ ಯಾಗುವುದು ಇದರ ಪ್ರಧಾನ ಲಕ್ಷಣವಾಗಿದೆ. ಹೇಗೆ ಕಮಲದ ಎಲೆಯಿಂದ ನೀರು ಅಂಟದೆ ಕೆಳಕ್ಕೆ ಬೀಳುವುದೋ ಹಾಗೆಯೇ ಅಲೋಭಿಯಲ್ಲಿ ಇಂದ್ರೀಯ ವಿಷಯಗಳು ಮನಸ್ಸಿನಲ್ಲಿ ಇರದೆ ಹೊರಕ್ಕೆ ಬೀಳುವುವು.
                ಒಬ್ಬನು ಅಲೋಭಿಯಾಗಿ ತನ್ನದು ಎನ್ನಿಸುವ ಸರ್ವವನ್ನು ದಾನ ಮಾಡಿದಾಗ ಆತನಲ್ಲಿ ಅಲೋಭವು ನೆಲೆಸುತ್ತದೆ. ಹೀಗೆ ಅಲೋಭದಿಂದ ಲೋಭವನ್ನು ಜಯಿಸಬಹುದು. ಅಲೋಭ ಎಂದರೆ ದಾನ, ಅಲೋಭ ಎಂದರೆ ವೈರಾಗ್ಯ. ಅಲೋಭವು 3 ಕುಶಲ ಸ್ಥಿತಿಗಳಲ್ಲಿ ಒಂದಾಗಿದೆ. ದಾನವು ಬೆಳೆಯಲು ಇದು ಉತ್ತಮವಾದ ಗುಣವಾಗಿದೆ.

6.            ಅದೋಸ (ಅದ್ವೇಷ) : ಅದೋಸವು ದೋಸಕ್ಕೆ ವಿರುದ್ಧವಾಗಿದೆ. ಇದು ದೋಸವನ್ನು ಜಯಿಸುತ್ತದೆ. ಇದು ಕೇವಲ ದ್ವೇಷರಹಿತತೆ ಮಾತ್ರವಲ್ಲ, ಬದಲಾಗಿ ಪರೋಪಕಾರಕ ಸದ್ಗುಣವಾಗಿದೆ.
                ದೋಸದ ಲಕ್ಷಣವೆಂದರೆ ಒರಟುತನ ಮತ್ತು ಕ್ರೌರ್ಯವಾಗಿದೆ. ಆದರೆ ಇಲ್ಲಿ ಅದೋಸ ಲಕ್ಷಣವೆಂದರೆ ಮೃದುತೆ ಮತ್ತು ಕ್ಷಮೆ (ಕರುಣೆ) ಆಗಿದೆ. ದೋಸವು ಶತ್ರುವಿನಂತಿದ್ದರೆ, ಇದು ಮಿತ್ರನಂತಿರುತ್ತದೆ. ಅದೋಸವು ಮೈತ್ರಿಯಿಂದ ಪ್ರತಿಫಲಿಸುತ್ತದೆ. ಹಾಗೆಯೇ ಕರುಣೆ ಮತ್ತು ಸಹಾಯದಿಂದಲೂ ಪ್ರತಿಫಲಿತಸುತ್ತದೆ.
                ಯಾವಾಗ ಅದೋಸವು ಸರ್ವಜೀವಿಗಳ ಬಗ್ಗೆ ಇದರ ಗಮನವನ್ನು ತಿರುಗಿಸುತ್ತದೆಯೋ ಆಗ ಅದನ್ನು ಮೆತ್ತಾ ಎನ್ನುತ್ತಾರೆ. ಅದೋಸವು ಕುಶಲದ 3 ಬೇರುಗಳಲ್ಲಿ ಒಂದಾಗಿದೆ.

7.            ತತ್ರಮಜ್ಹತ್ತತಾ (ಸಮಚಿತ್ತತೆ) : ತತ್ರಮಜ್ಹತ್ತತಾದ ಮುಖ್ಯ ಲಕ್ಷಣವೇನೆಂದರೆ ವಿಷಯಗಳ ಬಗ್ಗೆ ನಿಷ್ಪಕ್ಷಪಾತದ ದೃಷ್ಟಿಕೋನ. ಅಂದರೆ ಯಾವುದರ ಪಕ್ಷಪಾತವಿಲ್ಲದೆ ತೀಮರ್ಾನ ನೀಡುವುದು. ಎಲ್ಲರಿಗೂ ಸಮಾನ ಅವಕಾಶ ನೀಡುವುದು. ಇದರಿಂದಾಗಿ ಚಿತ್ತ ಮತ್ತು ವಿಷಯಗಳು ಸಮತೋಲಿತನಾಗುತ್ತವೆ. ಇವೆಲ್ಲವೂ ಸಮಾನ ಹೆಜ್ಜೆಯಿಂದ ಕ್ರಿಯೆವಹಿಸುತ್ತವೆ. ಯಾವುದರಲ್ಲೂ ಕೊರತೆ ಬಾರದಂತೆ ನೋಡಿಕೊಳ್ಳುತ್ತದೆ. ಇದಕ್ಕೆ ಉಪೇಕ್ಖಾ ಅಂದರೆ ಸಮಚಿತ್ತತೆ ಎಂದೂ ಕರೆಯುತ್ತಾರೆ. ಉಪೇಖ್ಖಾವು ಕರುಣಾ ಮತ್ತು ಮುದಿತಾಗಳ ನಡುವಿನ ಸ್ಥಿತಿಯಾಗಿದೆ. ಉಪೇಖ್ಖಾದಿಂದಲೆ ಬೋಧಿ ಅಂಗಗಳ ಘನತೆಯು ಮೇಲೇರಿದೆ. ಇದು ನಾಲ್ಕು ಬ್ರಹ್ಮ ವಿಹಾರಗಳಲ್ಲಿ ಒಂದಾಗಿದೆ ಮತ್ತು ಸಪ್ತಬೋಧಿ ಅಂಗಗಳಲ್ಲಿ ಒಂದಾಗಿದೆ. ಹಾಗೆಯೇ ತಟಸ್ಥ ವೇದನೆಯೂ ಆಗಿದೆ.

8 ಮತ್ತು 9) ಕಾಯ ಪಸ್ಸದ್ಧಿ ಮತ್ತು ಚಿತ್ತ ಪಸ್ಸದ್ಧಿ (ಪ್ರಶಾಂತತೆ) :
                ಕಾಯವೆಂದರೆ ದೇಹ ಮತ್ತು ಚಿತ್ತವೆಂದರೆ ಮನಸ್ಸು ಪಸ್ಸದ್ಧಿ ಎಂದರೆ ಪ್ರಶಾಂತತೆ, ಶಾಂತತೆ, ನಿಶ್ಚಲತೆ, ನಿಶ್ಶಬ್ದತೆ. ಹೀಗಾಗಿ ಕಾಯ ಪಸ್ಸದ್ಧಿಯು ಚಿತ್ತಕಾಯದ ಪ್ರಶಾಂತತೆಯ ಆಗಿದೆ. ಹಾಗೆಯೇ ಚಿತ್ತ ಪಸ್ಸದ್ಧಿಯು, ಚಿತ್ತ ವಿಷಯಗಳ ಪ್ರಶಾಂತತೆಯಾಗಿದೆ.
                ಪಸ್ಸದ್ಧಿಯಿಂದ ಉಜುಕತಾದವರೆಗಿನ ಜೋಡಿಗಳು ಕಾಯ ಮತ್ತು ಚಿತ್ತವೆಂದು ವಿಂಗಡಿಸಲಾಗಿದೆ. ಏಕೆಂದರೆ ಇವು ಜೊತೆಗೆ ಇರುತ್ತವೆ ಮತ್ತು ಜೊತೆಯೇ ತಮ್ಮ ವಿರೋದಾತ್ಮಕ ಗುಣವನ್ನು ದಮಿಸುತ್ತದೆ.
                ಚಿತ್ತ ಪಸ್ಸದ್ಧಿಯಲ್ಲಿ ಚಿತ್ತವು ಪ್ರಶಾಂತತೆಯನ್ನು ಅನುಭವಿಸುತ್ತದೆ. ಆದರೆ ಕಾಯ ಪಸ್ಸದಿಯಲ್ಲಿ ಚಿತ್ತದ ರೂಪವಾದ ಚಿತ್ತಕಾಯವೆಲ್ಲಾ ಪ್ರಶಾಂತತೆಯನ್ನು ಅನುಭವಿಸುತ್ತದೆ.
                ಪಸ್ಸದ್ಧಿಯು ಭಾವೋದ್ರೇಕಗಳನ್ನೆಲ್ಲಾ ದಮಿಸುವ, ಪ್ರಧಾನ ಲಕ್ಷಣವನ್ನು ಹೊಂದಿವೆ. ಸೂರ್ಯತಾಪದಿಂದ ಪಾರಾಗಲು ತಂಪಾದ ಮರದ ನೆರಳಿನ ರೀತಿ ಪಸ್ಸದ್ಧಿಯ ಪ್ರಶಾಂತತೆಯನ್ನು ನೀಡುತ್ತದೆ.
                ಪಸ್ಸದ್ಧಿಯಿಂದ ಚಿಂತೆಯು, ಪಶ್ಚಾತ್ತಾಪವು ನಾಶವಾಗುತ್ತದೆ. ಇದನ್ನು ಪ್ರಬಲವಾಗಿ ವೃದ್ಧಿಸುವುದರಿಂದಾಗಿ ಇದು ಬೋಧಿ ಅಂಗವಾಗುತ್ತದೆ.

10 ಮತ್ತು 11) ಕಾಯ ಲಹುತಾ ಮತ್ತು ಚಿತ್ತ ಲಹುತಾ (ಹಗುರತನ) :
                ಲಹುತಾವೆಂದರೆ ಹಗುರತನ ಅಥವಾ ತೇಲುವಿಕೆ. ಇದರಿಂದಾಗಿ ಮಾನಸಿಕ ಭಾರತ್ವವೆಲ್ಲಾ ಇಳಿದುಹೋಗುತ್ತದೆ. ಕಾಯಲಹುತಾದಲ್ಲಿ ಭಾರತನದ ಅನುಭವವು ಇಲ್ಲವಾಗಿ ಹಗುರತನದ ತೇಲುವಿಕೆಯ ಅನುಭೂತಿ ಅನುಭವಿಸುತ್ತಾನೆ. ಚಿತ್ತಲಹುತಾದಲ್ಲಿ ಅತಿ ಹೊರೆಯನ್ನು ಇಳಿಸಿದಂತಹ ಭಾವನೆಯಲ್ಲಿರುತ್ತಾನೆ.
                ಇವೆರಡೂ ಥೀನಾ ಮತ್ತು ಮಿದ್ದಾ (ಜಡತೆ ಮತ್ತು ಅಲಸ್ಯ)ವನ್ನು ನಾಶಗೊಳಿಸುತ್ತದೆ.

12 ಮತ್ತು 13) ಕಾಯ ಮುದುತಾ ಮತ್ತು ಚಿತ್ತ ಮುದುತಾ (ಸ್ಥಿತಿಸ್ಥಾಪಕತ್ವ) :
                ಇವೆರಡೂ ಚಿತ್ತಕಾಯದ ಮತ್ತು ಚಿತ್ತದ ಸ್ಥಿತಿಸ್ಥಾಪಕತ್ವ ಗುಣಗಳಾಗಿವೆ. (ಮೆದುತ್ವ/ಬಾಗುವಂತಹುದು). ಇವು ಮನಸ್ಸಿನ ಬಿರುಸನ್ನು ತೆಗೆದುಹಾಕುತ್ತದೆ. ಬಿರುಸು ಸಂಭವಿಸುವುದು ಅಕುಶಲ ಚೇತಸಿಕಾಗಳಾದ ದಿಟ್ಟಿ ಮತ್ತು ಮಾನ (ಅಹಂ)ದಿಂದ. ಆದರೆ ಕಾಯ ಮುದಿತಾ ಮತ್ತು ಚಿತ್ತ ಮುದಿತಾದಿಂದ ಬಿರುಸು ನಶಿಸಿ ಕಾರ್ಯತ್ಮಕ, ಕ್ರಿಯಾತ್ಮಕ ಇಚ್ಛೆಗೆ ತಕ್ಕಂತೆ ಬಾಗುವ, ಮಣಿಯುವಂತಹ ಚಿತ್ತವು ಸಿದ್ಧವಾಗುತ್ತದೆ.
                ಮುದುತಾವು ಮಿಥ್ಯಾದೃಷ್ಟಿಗೆ ಮತ್ತು ಅಹಂಕಾರಕ್ಕೆ ವಿರುದ್ಧವಾಗಿದೆ.

14 ಮತ್ತು 15) ಕಾಯ ಕಮ್ಮನ್ನ್ಯತಾ ಮತ್ತು ಚಿತ್ತ ಕಮ್ಮನ್ನ್ಯತಾ (ಹೊಂದಿಕೊಳ್ಳುವಿಕೆ) :
                ಇವೆರಡೂ ಚೇತಸಿಕಾಗಳು ಚಿತ್ತಕಾಯದ ಹೊಂದಿಕೊಳ್ಳುವ ಗುಣ ಮತ್ತು ಚಿತ್ತದ ಹೊಂದಿಕೊಳ್ಳುವ ಗುಣವನ್ನು ತೋರಿಸುತ್ತದೆ. ಇವು ತಮ್ಮ ಕಾರ್ಯವನ್ನು ನಿರ್ವಹಿಸುವ  ದಕ್ಷತೆಯನ್ನು ತೋರಿಸುತ್ತದೆ.
ಇವುಗಳ ಮುಖ್ಯ ಲಕ್ಷಣವೇನೆದರೆ ಕಾರ್ಯ ಮಾಡದೆ ಇರುವಂತಹ ಅಥವಾ ಅಕ್ರಿಯೆಯ ಚಿತ್ತದ ಧಮಿಸುವಿಕೆಯಾಗಿದೆ. ಇವೆರಡು ಗುಣಗಳಿಂದ ಚಿತ್ತವು ಇಚ್ಛಾಮಾತ್ರದಿಂದ ಯಾವ ಪರಿಸ್ಥಿತಿಗೂ ಹೊಂದಿಕೊಳ್ಳುತ್ತದೆ. ಹೇಗೆ ಕಾಯಿಸಿದ ಚಿನ್ನದಿಂದ ನಾನಾ ಆಭರಣವನ್ನು ನಾವು ಹೊಂದಿಸುವ ರೀತಿ ಮಾಡಬಹುದೋ ಹಾಗೆಯೇ ಕಾಯಕಮ್ಮನ್ನ್ಯತಾ ಮತ್ತು ಚಿತ್ತ ಕಮ್ಮನ್ನ್ಯತಾದಿಂದ ಕುಶಲ ಸ್ಥಿತಿಗಳಿಗೆ ತಕ್ಕಂತೆ ಹೊಂದಿಸಬಹುದು. ಪ್ರಶಾಂತತೆಯನ್ನು ಮತ್ತು ಹೊಂದಿಕೊಳ್ಳುವಿಕೆಯನ್ನು ಇವು ನೀಡುತ್ತದೆ.

16 ಮತ್ತು 17) ಕಾಯ ಪಾಗುನ್ನ್ಯತಾ ಮತ್ತು ಚಿತ್ತ ಪಾಗುನ್ನ್ಯತಾ (ಪ್ರಾವಿಣ್ಯತೆ) :
                ಇದು ಚಿತ್ತಕಾಯದ ಪ್ರಾವೀಣ್ಯತೆ ಮತ್ತು ಚಿತ್ತದ ಪ್ರಾವೀಣ್ಯತೆ ಆಗಿದೆ. ಇವುಗಳ ಪ್ರಧಾನ ಲಕ್ಷಣ ಏನೆಂದರೆ ಚಿತ್ತದ ರೋಗ ಮತ್ತು ಕಾಯದ ರೋಗವನ್ನು ದಮನಿಸುವಿಕೆಯಾಗಿದೆ ಮತ್ತು ಅಶ್ರದ್ಧೆಯಂತಹ ಭಾವೋದ್ರೇಕಗಳಿಗೆ ವಿರೋಧವಾಗಿ ಧಮಿಸುತ್ತವೆ.

18 ಮತ್ತು 19) ಕಾಯಉಜುಕತಾ ಮತ್ತು ಚಿತ್ತಉಜುಕತಾ :
                ಇವು ಚಿತ್ತಕಾಯದ ಋಜುತ್ವ, ನೇರತೆಯನ್ನು ಮತ್ತು ಚಿತ್ತದ ಋಜುತ್ವ ಮತ್ತು ನೇರತೆಯಲ್ಲಿ ಪಾತ್ರವಹಿಸುತ್ತದೆ. ಇವು ವಂಚನೆ, ಮೋಸ ಮತ್ತು ನಯವಂಚನೆ, ಮಾಯಾವಿತನ, ಸೆಟೆಯಂತಹ ದುಶ್ಶೀಲತೆಗೆ ವಿರೋಧಾತ್ಮಕವಾಗಿದೆ.
                19 ಚೇತಸಿಕಾಗಳು ಯಾರು ದಿನನಿತ್ಯ ದಾನ, ಶೀಲ ಮತ್ತು ಧ್ಯಾನವನ್ನು ಪಾಲಿಸುತ್ತಿರುವವರೋ ಅಂತಹವರಲ್ಲಿ ಮಾತ್ರ ಉದಯಿಸುವಂತಹುದು. ಇವು ಕುಶಲವಾದುದರಿಂದ ಮತ್ತು ಸುಂದರವಾಗಿ, ಶೋಭಾಯಮಾನವಾಗಿ ಕಾಣುವುದರಿಂದಾಗಿ ಇವಕ್ಕೆ ಶೋಭನ ಸಾಧಾರಣ ಚೇತಸಿಕಾ ಎನ್ನುತ್ತಾರೆ.

3 ವಿರತಿ ಚೇತಿಸಿಕಾಗಳು (ಆನಂದದಿಂದ ವಿಮುಖವಾಗುವಿಕೆ) :
20.          1.            ಸಮ್ಮಾ ವಾಚಾ - ಯೋಗ್ಯವಾದ ಸಂಭಾಷಣೆ
21.          2.            ಸಮ್ಮಾ ಕಮ್ಮಂತ - ಯೋಗ್ಯವಾದ ಕರ್ಮ
22.          3.            ಸಮ್ಮಾ ಅಜೀವ - ಯೋಗ್ಯವಾದ ಜೀವನೋಪಾಯ.
                ಇವು ಮೂರನ್ನು ಶೀಲ ಮಾಗರ್ಾಂಗ ಎಂದು ಹೇಳಲಾಗಿದೆ. ಇವು ಶೀಲ ಶಿಕ್ಷಣಾಂಗಗಳನ್ನು ಹೊಂದಿವೆ. ಇವು ಆರ್ಯ ಅಷ್ಟಾಂಗ ಮಾರ್ಗಕ್ಕೆ ತಳಹದಿಯಾಗಿದೆ.

ಅಪ್ಪಮಾನ್ಯ ಚೇತಸಿಕಾ (ಸೀಮಾತೀತ / ಅಪ್ರಮಾನ್ಯ) :

23.       1.         ಕರುಣಾ - ದಯೆ/ಕರುಣೆ/ಅನುಕಂಪ
24.       2.         ಮುದಿತಾ - ಅಭಿನಂದನಾ ಆನಂದ/ಸಹಾನುಭೂತಿಯ ಆನಂದ.
                4 ಸೀಮಾತೀತ ಉದಾತ್ತ ಸ್ಥಿತಿಗಳಿವೆ. ಅವುಗಳನ್ನು ಸಾಧಿಸುವ ರೀತಿಯಲ್ಲಿ ವಗರ್ಿಕರಣ ಮಾಡಲಾಗಿದೆ. ಅವೆಂದರೆ ಮೆತ್ತಾ, ಕರುಣಾ, ಮುದಿತಾ ಮತ್ತು ಉಪೇಖ್ಖಾ. ಈಗಾಗಲೇ ನಾವು ಮೆತ್ತಾವನ್ನು ಅದೋಸದಲ್ಲಿ ಮತ್ತು ಉಪೇಖ್ಖಾವನ್ನು ತತ್ರಾಮಜ್ಹಕತಾದಲ್ಲಿ ವಿವರಿಸಿದ್ದೇವೆ. ಆದ್ದರಿಂದಾಗಿ ಉಳಿದ ಎರಡನ್ನು ಇಲ್ಲಿ ವಿವರಿಸಲಾಗಿದೆ.
                ಇವನ್ನು ಧ್ಯಾನಿಸುವಾಗ ನಾವು ಏಕ ವ್ಯಕ್ತಿಯ ಮೇಲೆ ಧ್ಯಾನಿಸಬಹುದು ಅಥವಾ ಸರ್ವಜೀವಿಗಳ ಮೇಲೂ ಧ್ಯಾನಿಸಬಹುದು. ಆದ್ದರಿಂದ ಇವನ್ನು ಸೀಮಾತೀತ (ಅಪ್ರಮಾಣಿತ) ಎನ್ನುತ್ತಾರೆ.
                ಮೈತ್ರಿ ಧ್ಯಾನದಲ್ಲಿ ನಾವು ಸರ್ವಜೀವಿಗಳು ಸುಖಿಯಾಗಿರಲಿ ಎಂದು ಧ್ಯಾನಿಸುತ್ತೇವೆ.
                ಕರುಣಾ ಧ್ಯಾನದಲ್ಲಿ ನಾವು ಸರ್ವಜೀವಿಗಳು ದುಃಖದಿಂದ ಮುಕ್ತರಾಗಲಿ ಎಂದು ಧ್ಯಾನಿಸುತ್ತೇವೆ.
                ಮುದಿತಾ ಧ್ಯಾನದಲ್ಲಿ ನಾವು ಸರ್ವಜೀವಿಗಳು ಉನ್ನತಿಗಳನ್ನು ಹೊಂದಲಿ ಎಂದು ಧ್ಯಾನಿಸುತ್ತೇವೆ.
                ಉಪೇಖ್ಖಾ ಧ್ಯಾನದಲ್ಲಿ ತಮ್ಮ ಕರ್ಮಕ್ಕೆ ತಾವೇ ಬದ್ಧರು ಎಂದು ಧ್ಯಾನಿಸುತ್ತೇವೆ.
                ಯಾರೇ ಆಗಲಿ, ಬ್ರಹ್ಮವಿಹಾರಗಳನ್ನು ಧ್ಯಾನಿಸುವಾಗ ಬ್ರಹ್ಮರ ವಿಹಾರದಲ್ಲಿ/ಉದಾತ್ತರ ವಿಹಾರದಲ್ಲಿ ನೆಲೆಸಿದ್ದನೆ ಎನ್ನುತ್ತಾರೆ. ಆದ್ದರಿಂದ ಇವನ್ನು ಬ್ರಹ್ಮವಿಹಾರ ಎನ್ನುತ್ತಾರೆ.
                ಮೈತ್ರಿ ಧ್ಯಾನವು ಸರ್ವ ಒಳಿತಿಗಾಗಿ, ಸಹೃದಯ ಹಾರೈಕೆಯಾಗಿದೆ. ಕೋಪವು ಇದರ ನೇರ ಶತೃವಾದರೆ, ಪ್ರೇಮವು ಪರೋಕ್ಷ ಶತ್ರುವಾಗಿದೆ. ಸಹೃದಯ ದೃಷ್ಟಿಕೋನವು ಇದರ ಪ್ರಧಾನ ಲಕ್ಷಣವಾಗಿದೆ.
                ಕರುಣಾಧ್ಯಾನವು ಮಾಡುವಾಗ ಪರರ ದುಃಖ ಕಂಡು ಹೃದಯವು ಕಂಪಿಸುತ್ತದೆ. ಆದ್ದರಿಂದಲೇ ಇದಕ್ಕೆ ಅನುಕಂಪ ಎನ್ನುತ್ತಾರೆ. ಇದರ ಪ್ರಧಾನ ಲಕ್ಷಣವೇನೆಂದರೆ ಸರ್ವರ ದುಃಖ ವಿಮುಕ್ತಿಯನ್ನು ಬಯಸುವುದು. ಇದರಿಂದಾಗಿ ಕ್ರೂರತ್ವ ನಾಶವಾಗುತ್ತದೆ ಮತ್ತು ಇದರ ಪರೋಕ್ಷ ಶತ್ರು ಗೋಳಾಡುವಿಕೆ.
                ಮುದಿತಾವು ಸಹಾನುಭೂತಿಯ ಅಭಿನಂದನಾ ಆನಂದವಾಗಿದೆ. ಇದರ ಪ್ರಧಾನ ಲಕ್ಷಣವೇನೆಂದರೆ ಪರರ ಉನ್ನತಿ ಕಂಡು ಆನಂದಿಸುವುದು. ಇದರಿಂದ ನೇರ ಶತ್ರುವಾದ ಅಸೂಯೆ ನಾಶವಾಗುತ್ತದೆ ಮತ್ತು ಇದರ ಪರೋಕ್ಷ ಶತ್ರು ಪಹಾಸ (ಸಂಭ್ರಮಿಸುವಿಕೆ) ಆಗಿದೆ ಮತ್ತು ಇದರಿಂದ ಅಸಹ್ಯತೆ ತೊಡೆದುಹೋಗುತ್ತದೆ.
                ಉಪೇಖ್ಖಾ (ಉಪೇಕ್ಷಾ/ಸಮಚಿತ್ತತೆ)ವು ಸರ್ವಜೀವಿಗಳನ್ನು ಸಮಾನವಾಗಿ ನೋಡುವುದಾಗಿದೆ. ಅಂದರೆ ಅವರಲ್ಲಿ ಯಾವುದೇ ರೀತಿಯ ಆನಂದವು ಪಡದೆ ಹಾಗೆಯೇ ಯಾವರೀತಿಯ ದ್ವೇಷವು ಪಡೆದೆ ಇರುವುದಾಗಿದೆ. ಇದು ಸಮತ್ವದ ಚಿತ್ತದ ಸ್ಥಿತಿಯಾಗಿದೆ. ಇದರ ನೇರ ಶತ್ರು ರಾಗವಾಗಿದೆ ಮತ್ತು ಪರೋಕ್ಷ ಶತ್ರು ಬುದ್ಧಿಹೀನ ಉಪೇಕ್ಷೆ (ಉದಾಸೀನತೆ)ಯಾಗಿದೆ. ಪಕ್ಷಪಾತರಹಿತ ದೃಷ್ಟಿಕೋನ ಇದರ ಪ್ರಧಾನ ಲಕ್ಷಣವಾಗಿದೆ.

25.    ಪಞ್ಞೆಂದ್ರಿಯ :

                ಪನ್ಯಾ ಎಂದರೆ ಪ್ರಜ್ಞಾ ಅಥವಾ ಅಂತರ್ದೃಷ್ಟಿಯಾಗಿದೆ ಮತ್ತು ಇಂದ್ರೀಯವೆಂದರೆ ನಿಯಂತ್ರಿಸುವ ಅಂಗವಾಗಿದೆ.
                ಪನ್ಯೇಂದ್ರಿಯಕ್ಕೆ ಅರ್ಥಮಾಡಿಕೊಳ್ಳುವ ವಿಷಯಗಳ ಮೇಲೆ ನಿಯಂತ್ರಣವಿರುತ್ತದೆ. ಅವು ವಸ್ತುಸ್ಥತಿಗಳನ್ನು ಯಥಾಭೂತವಾಗಿ ಅವು ಹೇಗಿವೆಯೋ ಹಾಗೆಯೇ ನೋಡುವ ಸಾಮಥ್ರ್ಯವಿರುತ್ತದೆ. ಇದು ಪಂಚಖಂಧಗಳ ಅನಿತ್ಯತೆ, ದುಃಖ, ಅನಾತ್ಮತೆ, ನೋಡುತ್ತದೆ. ಇದರಿಂದ ಮೋಹವು (ಅಜ್ಞಾನ) ನಶಿಸುತ್ತದೆ. ಇದನ್ನು ವಿದ್ಯೆ (ವಿಜ್ಜ) ಎಂದು ಕರೆಯುತ್ತಾರೆ.
                ಇದನ್ನು ಪನ್ಯಾ ಚೇತಸಿಕಾ, ಪನ್ಯಾ, ಜ್ಞಾನ ಮತ್ತು ಅಮೋಹ ಎಂದು ಕರೆಯುತ್ತಾರೆ. ಇದು 3 ಕುಶಲ ಬೇರುಗಳಲ್ಲಿ ಒಂದಾಗಿದೆ. 4 ಇದ್ದಿಪಾದಗಳಲ್ಲಿ ಒಂದಾಗಿದೆ (ಮಿಮಾಂಸ ಇದ್ದಿಪಾದ), ಹಾಗೆಯೇ ಪಂಚಬಲಗಳಲ್ಲಿ ಒಂದಾಗಿದೆ (ಪನ್ಯಾಬಲ), ಹಾಗೆಯೇ ಪಂಚೇಂದ್ರಿಯಗಳಲ್ಲಿ ಒಂದಾಗಿದೆ (ಪನ್ನೇಂದ್ರಿಯ) ಹಾಗೆಯೇ ಸಪ್ತಬೋಧಿ ಅಂಗಗಳಲ್ಲಿ ಒಂದಾಗಿದೆ (ಧಮ್ಮವಿಚಯ ಬೋಧಿ ಅಂಗ) ಮತ್ತು ಆರ್ಯ ಅಷ್ಟಾಂಗ ಮಾರ್ಗದಲ್ಲಿ ಒಂದಾಗಿದೆ (ಸಮ್ಮಾದೃಷ್ಟಿ).
                ಹೀಗೆ ಇವು ಸಂಖಾರ ಖಂಧ (ರಾಶಿ)ವಾಗಿದೆ. ಅಂದರೆ 52 ಚೇತಸಿಕಾಗಳಲ್ಲಿ ಸನ್ಯಾ ಮತ್ತು ವೇದನಾ ಹೊರತುಪಡಿಸಿದರೆ ಉಳಿದುದೆಲ್ಲಾ ಸಂಖಾರಗಳೇ ಆಗಿವೆ. ಸಂಖಾರಗಳ ಉದಯ ಮತ್ತು ಇರುವಿಕೆ ಮತ್ತು ಅಳಿಯುವಿಕೆಯನ್ನು ಸಾಧಕನು ಗಮನಿಸುತ್ತಾನೆ. ಹೀಗೆ ಆತನು ಶಾರೀರಿಕ ಮತ್ತು ಮಾನಸಿಕಾಗಳ ಲಕ್ಷಣಗಳನ್ನು ಅರಿಯುತ್ತಾನೆ, ಕ್ರಿಯೆಗಳನ್ನು ಅರಿಯುತ್ತಾನೆ. ಅವುಗಳ ಸ್ಥತಿಗಳನ್ನು ಅವು ನೆಲೆಗೊಳ್ಳುವುದನ್ನು ಮತ್ತು ಅವುಗಳಿಗೆ ತತ್ಕ್ಷಣದ ಕಾರಣಗಳನ್ನು ಮತ್ತು ಮೂಲ ಕಾರಣಗಳನ್ನು ಅರಿಯುತ್ತಾನೆ.
                ಆತ ಆತನಲ್ಲಿದ್ದ ಆತ್ಮದ ಬಗೆಗಿನ ಮಿಥ್ಯಾದೃಷ್ಟಿ ದೂರವಾಗುತ್ತದೆ. ಆತನಿಗೆ ಕೇವಲ ಶರೀರ ಮತ್ತು ಮನಸ್ಸುಗಳ ಸೂಕ್ಷ್ಮಾತಿಸೂಕ್ಷ್ಮ ಹಂತಗಳು ಕಾಣುತ್ತಾನೆ. ಅವುಗಳ ನಡುವಿನ ಪರಸ್ಪರ ಅವಲಂಬನೆಯನ್ನು ಕಾಣುತ್ತಾನೆ. ಆತನಿಗೆ ಆತ್ಮವಿಲ್ಲದೆ ಎಲ್ಲಾ ಕ್ರಿಯೆಗಳು ಪರಸ್ಪರ ಅವಲಂಬನೆಯಿಂದ ನಡೆಯುತ್ತಿರುವುದು ಕಾಣುತ್ತದೆ. ದೇಹ ಮತ್ತು ಮನಸ್ಸುಗಳ ಹಿನ್ನಲೆಯಲ್ಲಿ ಯಾವುದೇ ನಿಯಂತ್ರಿಸುವ ಶಕ್ತಿ (ಆತ್ಮ)ಯನ್ನು ಆತ ಕಾಣಲಾರ. ನಾಮರೂಪಗಳ ವಿಶ್ಲೇಷಣೆಗಳ ಜ್ಞಾನಕ್ಕೆ ನಾಮರೂಪ ವವತ್ಥನ ಜ್ಞಾನ ಎನ್ನುತ್ತಾರೆ. ಏಕೆಂದರೆ ಇಲ್ಲಿ ನಾಮರೂಪಗಳ ಬಗ್ಗೆ ಪೂರ್ಣವಾಗಿ ಅರಿವು ಉಂಟಾಗುತ್ತದೆ.
                ಒಬ್ಬನು ಹಣ್ಣನ್ನು ಅಥವಾ ಯಾವುದಾದರೂ ವಸ್ತುವನ್ನು ಸೀಳಿ, ವಿಭಾಜಿಸಿ ಅರಿಯುವಂತೆ ಆತನು ಪಂಚಖಂಧಗಳನ್ನು/ಧಾತುಗಳನ್ನು/ಆಧಾರಗಳನ್ನು/ನಾಮರೂಪಗಳನ್ನು ಅರಿಯುತ್ತಾನೆ. ಹೀಗೆ ಅರಿಯುವಾಗ ಆತನಿಗೆ ದೇಹ ಮತ್ತು ಮನಸ್ಸಿನ ವಿನಃ ಯಾವುದೇ ಆತ್ಮವಾಗಲಿ, ಶಕ್ತಿಯಾಗಲಿ, ವ್ಯಕ್ತಿಯಾಗಲಿ, ದೇವತೆಯಾಗಲಿ, ಅಥವಾ ಬ್ರಹ್ಮವಾಗಲಿ ಶರೀರದ ಒಳಗೆ/ಹಿಂದೆ ಎಲ್ಲಿಯೂ ಕಾಣಲಾರ.
                ಹೀಗೆಯೇ ವಿಶ್ಲೇಷಿಸುತ್ತಾ ಆತನು ವ್ಯಕ್ತಿ, ನಾನು, ಆತ್ಮ ಎಂಬಂತಹ ಗೊಂದಲ, ಸಂಶಯ, ಮಿಥ್ಯಾದೃಷ್ಟಿಗಳನ್ನು ತ್ಯಜಿಸುತ್ತಾನೆ.
                ಇಲ್ಲಿ ಕೇವಲ ನಾಮ (ಮನಸ್ಸು) ರೂಪ (ದೇಹ)ವೇ ಮಾತ್ರ ಇದೆ. (ನಾನು ಎಂಬುದು ಆಗಲಿ, ನನ್ನದು ಎಂಬುದಾಗಲಿ ಅಥವಾ ನನ್ನ ಆತ್ಮ ಎಂಬುದಾಗಲಿ ಯಾವುದೂ ಇಲ್ಲ ಎಂಬ ಜ್ಞಾನವು ಆತನಿಗೆ ಸಿಗುತ್ತದೆ).
                ಕೆಲವು ಭಾಗಗಳನ್ನು ಜೋಡಿಸಿ ರಥ ಎಂಬ ಪದವನ್ನು ನೀಡುತ್ತಾರೆ. ಹಾಗೆಯೇ ರಾಶಿಗಳು (ನಾಮರೂಪವು) ಇರುವಾಗ ಜೀವಿ/ವ್ಯಕ್ತಿ ಎಂಬ ಸಾಮಾನ್ಯ ಪದವನ್ನು ಬಳಸುತ್ತಾರೆ.

                ಬುದ್ಧರ ನೂರಾರು ಬೋಧನೆಗಳಲ್ಲಿ ನಾಮರೂಪದ ಬಗ್ಗೆ ಉಲ್ಲೇಖವಿದೆ. ಆದರೆ ವ್ಯಕ್ತಿಯ ಬಗ್ಗೆ ಉಲ್ಲೇಖವಾಗಿಲ್ಲ. ರಥದ ಪೀಠ, ಚಕ್ರಗಳು, ಧ್ವಜ, ಕುದುರೆಗಳು ಇತ್ಯಾದಿ ಸೇರಿ ರಥ ಎನಿಸುತ್ತದೆ ಹೊರತು ರಥವೆಂಬುದಿಲ್ಲ ಎಂದು ಅರಿಯುತ್ತಾರೆ. ಹಾಗೆಯೇ ಕಟ್ಟಡಗಳು, ಮನೆಗಳು, ಮನುಷ್ಯರು, ಪ್ರಾಣಿಗಳು ಸೇರಿ ನಗರ ಎನಿಸುತ್ತದೆ. ಆದರೆ ವಾಸ್ತವಿಕವಾಗಿ ನಗರ ಎಂಬುದಿಲ್ಲ. ಹೀಗೆಯೇ ವ್ಯವಹಾರ ದೃಷ್ಟಿಕೋನದಲ್ಲಿ ವ್ಯಕ್ತಿ ಎಂದು ಬಳಸುತ್ತೇವೆ. ಆದರೆ ಪರಮಾರ್ಥ ದೃಷ್ಟಿಕೋನದಲ್ಲಿ ವ್ಯಕ್ತಿ ಎಂಬುದೇ ಇಲ್ಲ

No comments:

Post a Comment

25 shobhana cetasikas in kannada ಶೋಭನ ಚೇತಾಸಿಕಾಗಳು

ಶೋಭನ ಚೇತಾಸಿಕಾಗಳು ( ಅಂದರೆ ಸುಂದರವಾದ ಮಾನಸಿಕಾ ಸ್ಥಿತಿಗಳು )                 25 ಶೋಭನ ಚೇತಸಿಕಾಗಳಿವೆ . ಅವು 4 ಭಾಗವಾಗಿ ವಗರ್ಿಕರಿಸಿದೆ . ...