ಚೇತಸಿಕ ಗಳು
ಚೇತಸಿಕಗಳೆಂದರೆ ಮಾನಸಿಕ
ವಿಷಯಗಳಾಗಿವೆ. ಇವು ಚಿತ್ತದೊಂದಿಗೆ
ಉದಯಿಸುತ್ತವೆ. ಚಿತ್ತವೆಂದರೆ ಮನಸ್ಸಾಗಿದೆ.
ಚಿತ್ತಕ್ಕೆ ಪರ್ಯಾಯ
ಪದಗಳೆಂದರೆ ವಿಜ್ಞಾನ
ಇತ್ಯಾದಿ. ಚೇತಸಿಕವು ಶಾಬ್ದಿಕಾವಾಗಿ
ಹೇಳುವುದಾದರೆ ಚೇತೋ
ಎಂಬ ಪದದಿಂದಾಗಿದೆ
ಅಂದರೆ ಚಿತ್ತಕ್ಕೆ
ಸೇರಿದ್ದು ಎಂಬ
ಅರ್ಥ.
ದೇಹಕ್ಕೆ ದೇಹದ
ಅಂಗಗಳಿರುವಂತೆ ಚಿತ್ತಕ್ಕೆ
ಚೇತಸಿಕಗಳು ಇರುತ್ತವೆ.
ಉದಾಹರಣೆಗೆ ದೇಹಕ್ಕೆ
ಕಣ್ಣು, ಕೈ, ಕಾಲು ಇರುವಂತೆ
, ಚಿತ್ತಕ್ಕೆ ಕರುಣೆ,
ಪಞ್ಞ, ಏಕಾಗ್ರತೆ ಇತ್ಯಾದಿ
ಚೇತಸಿಕಗಳ
ಅಂಗಗಳಿರುತ್ತವೆ. ಅದರೆ ದೇಹದಲ್ಲಿ
ಎಲ್ಲಾ ಅಂಗಗಳು
ಸದಾ ವಿರಜಮಾನವಾಗಿರುತ್ತವೆ. ಅದರೆ ಚಿತ್ತಕ್ಕೆ
ಕೆಲವು ಚೇತಸಿಕಾಗಳು
ಮಾತ್ರವೇ ಸಂದಭರ್ಿಕವಾಗಿ
ಅದರೊಂದಿಗೆ ಉದಯಿಸುತ್ತವೆ.
ಅಂದರೆ ಕೆಲವೊಮ್ಮೆ
ಕರುಣೆ ಕೆಲವೊಮ್ಮೆ
ದ್ವೇಷ ಹೀಗೆ
ಚಿತ್ತ ಹಾಗೂ
ಧಮ್ಮ(ಮಾನಸಿಕಾ
ವಿಷಯ)ಕ್ಕೆ
ಅನುಸಾರವಾಗಿ ಉದಯಿಸುತ್ತವೆ.
ಅದರೆ 7 ಚೇತಸಿಕಾಗಳು ಸಮಾನ್ಯರಲ್ಲಿ
ಸದಾ ಇರುತ್ತದೆ.
ಇದರ ವಿವರಣೆ
ಮುಂದೆ ಸಿಗುವುದು.
ಚಿತ್ತಗಳು ಚೇತಸಿಕಗಳೊಂದಿಗೆ ಪ್ರತಿ ಕ್ಷಣದ
ಅನುಭವವನ್ನು ಜೋತೆಯಾಗಿ
ಹಂಚಿಕೊಳ್ಳುತ್ತವೆ. ಪ್ರತಿ ಚೇತಸಿಕಕ್ಕೆ
ತನ್ನದೆ ಆದ
ಕಾರ್ಯವಿರುತ್ತದೆ. ಉದಾಹರಣೆಗೆ ಮಾನ(ಅಹಂಕಾರ)ದ
ಲಕ್ಷಣ ಜಂಬವಾಗಿರುತ್ತದೆ, ಮತ್ತು ಸ್ವ-ಪ್ರಶಂಸೆಯು ಅದರ
ಕ್ರಿಯೆಯಾಗಿರುತ್ತದೆ. ಈ ಚೇತಸಿಕಗಳು
ಚಿತ್ತದೊಂದಿಗೆ ಉದಯಿಸಿ
ಚಿತ್ತದೊಂದಿಗೆ ಅಳಿಯುತ್ತದೆ
.
ಸುತ್ತಪಿಟಿಕದಲ್ಲಿ ಅಸ್ತಿತ್ವವನ್ನು
5 ವಿಭಾಗಗಳಾಗಿ ವಿಂಗಡಿಸುತ್ತೇವೆ. ಅವೆಂದರೆ ರೂಪ(ದೇಹ), ವೇದನ ,ಸಞ್ಞ, ವಿಞ್ಞನ, ಮತ್ತು ಸಂಖಾರ.
ಅದರೆ ಅಭಿಧಮ್ಮದಲ್ಲಿ
3 ವಿಭಾಗವಾಗಿ ವಿಂಗಡಿಸುತ್ತೇವೆ.ಅವೆಂದರೆ ರೂಪ,
ಚಿತ್ತ,ಮತ್ತು
ಚೇತಸಿಕಾ.
ಸುತ್ತದಲ್ಲಿ ಬರುವಂತಹ
ಸಞ್ಞ, ವೇದನ ಹಾಗೂ
50 ಸಂಖಾರಗಳು ಇಲ್ಲಿ
ಒಟ್ಟಾಗಿ 52 ಚೇತಸಿಕಾವಾಗುತ್ತವೆ.
7 ಸರ್ವಸಾಧಾರಣ+6 ಪಕಿಣ್ಣಕ
+14 ಅಕುಶಲ +25 ಶೋಭನ=52
ಚೇತಸಿಕಗಳಾಗಿವೆ
No comments:
Post a Comment